ಗಾಂಧೀನಗರ ಜಿಲ್ಲೆ : ಗಾಂಧೀನಗರ ಮತ್ತು ಸುತ್ತಲಿನ ಸ್ವಲ್ಪ ಪ್ರದೇಶವನ್ನು ಸೇರಿಸಿ ಹೊಸದೊಂದು ಜಿಲ್ಲೆಯನ್ನು ರಚಿಸಲಾಗಿದೆ. ಒಟ್ಟು 58,000 ಹೆಕ್ಟೇರ್ ವಿಸ್ತಾರವುಳ್ಳ ಈ ಜಿಲ್ಲೆ ನಗರದ ಸುತ್ತಮುತ್ತ ಸು.12 ಕಿಮೀ ವರೆಗೆ ಹರಡಿಕೊಂಡಿದೆ. ಇದರಲ್ಲಿ ಒಟ್ಟು 79 ಗ್ರಾಮಗಳಿವೆ. ನಾಲ್ಕು ಗ್ರಾಮಗಳು ಗಾಂಧೀನಗರದ ನಿವೇಶನದಲ್ಲಿ ಸೇರಿಹೋಗಿವೆ. ಜಿಲ್ಲೆಯ ಒಟ್ಟು ಜನಸಂಖ್ಯೆ 13,87,478 (2011). 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ